ಬಾಯರ್ ಫಾರ್ಮ್‌ರೈಸ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿ!
ಪರಿಹಾರಗಳಿಗಾಗಿ ಕೃಷಿ ತಜ್ಞರು!

ಪಪ್ಪಾಯಿ ಜನಪ್ರಿಯ ಹಣ್ಣು ಇದು ಪೌಷ್ಠಿಕಾಂಶ ಮತ್ತು ಔಷಧೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ಸಸಿ ನೆಟ್ಟ ನಂತರ ಹಣ್ಣು ಬಿಡಲು, ಪಪ್ಪಾಯಿ ಇತರ ಯಾವುದೇ ಹಣ್ಣಿನ ಬೆಳೆಗಳಿಗಿಂತ ಬಹಳ ಕಡಿಮೆ ಅವಧಿ ತೆಗೆದುಕೊಳ್ಳುತ್ತದೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹಣ್ಣುಗಳನ್ನು ಉತ್ಪಾದಿಸುತ್ತದೆ ಮತ್ತು ಪ್ರತಿ ಯೂನಿಟ್ ಪ್ರದೇಶಕ್ಕೆ ಬರುವ ಹಣ್ಣಿನ್ನ ಉತ್ಪಾದನೆಯಲ್ಲಿ ಪಪ್ಪಾಯಿ ಹಣ್ಣಿನ ಉತ್ಪಾದನೆಯು ಬೇರೆ ಹಣ್ಣು ಬೆಳೆಗಳ ಉತ್ಪಾದನೆಯ ತುಲನೆಯಲ್ಲಿ ಅಧಿಕವಾಗಿರುತ್ತದೆ.
ಇದು ಉಷ್ಣವಲಯದ ಹಣ್ಣಾಗಿದ್ದು, ಬೇಸಿಗೆಯ ಉಷ್ಣತೆಯು 35°C - 38°C ವರೆಗಿನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಚಳಿಯನ್ನು ಸಹಿಸಿಕೊಳ್ಳುತ್ತದೆ ಮತ್ತು ಸಮುದ್ರ ಮಟ್ಟದಿಂದ 1200 ಮೀಟರ್ ಎತ್ತರದವರೆಗಿನ ಪ್ರದೇಶಗಳಲ್ಲಿ ಬೆಳೆಯುತ್ತದೆ. ಸಮನಾದ ಕಣಗಳನ್ನು ಹೊಂದಿರುವ ನೀರು ಚೆನ್ನಾಗಿ ಬಸಿದು ಹೋಗುವ ಮಣ್ಣು ಈ ಬೆಳೆಗೆ ಬಹಳ ಸೂಕ್ತ, ಇದು ಕಾಲರ್ ರಾಟ್ ನಂತಹ ರೋಗಗಳು ಬರುವ ಸಂಭವವನ್ನು ಕಡಿಮೆ ಮಾಡುತ್ತದೆ.


ನಾಟಿ ಮತ್ತು ಋತು: ಭಾರತದಲ್ಲಿ ಪಪ್ಪಾಯಿಯನ್ನು ಕೆಳಗೆ ಸೂಚಿಸಿದ ಕಾಲಮಾನಗಳಲ್ಲಿ ಬೆಳೆಯಬಹುದು. ➥ ವಸಂತ ಋತು (ಫೆಬ್ರವರಿ -ಮಾರ್ಚ್) ➥ ಮುಂಗಾರು ಋತು (ಜೂನ್-ಜುಲೈ) ➥ ಶರತ್ಕಾಲದ ಋತು (ಅಕ್ಟೋಬರ್-ನವೆಂಬರ್)
ಅತ್ಯುತ್ತಮವಾದ ತಳಿಗಳೆಂದರೆ, ತೈವಾನ್ 786, ಪೂಸ ನನ್ಹ, 15 ನಂಬರ್, ರೆಡ್ ಚಿಲ್ಲಿ, ಗ್ರೀನ್ ಬೆರ್ರಿ, ಐಸ್ ಬೆರ್ರಿ, ರಾಸ್ಪ್ ಬೆರ್ರಿ, ಮೇರಿವಾಲಾ. ವಾಣಿಜ್ಯವಾಗಿ ಪಪ್ಪಾಯವನ್ನು ಬೀಜಗಳಿಂದ ಸಂತಾನಾಭಿವೃದ್ಧಿ ಮಾಡಲಾಗುತ್ತದೆ. ಅಂಗಾಂಶ ಕೃಷಿ ತಂತ್ರದ (ಟಿಶ್ಯೂ ಕಲ್ಚರ್) ಸಸಿಗಳು ಉತ್ತಮವಾಗಿರುತ್ತವೆ ಆದರೆ ಅವು ಟಿಶ್ಯೂ ಕಲ್ಚರ್ ಲ್ಯಾಬ್ ಮತ್ತು ಸಂಶೋಧನಾಲಯಗಳ ಹತ್ತಿರ ಮಾತ್ರವೇ ದೊರೆಯುತ್ತವೆ. ಬೀಜಗಳು ಅಲ್ಪಾವಧಿ ಜೀವಕಾಲವನ್ನು ಹೊಂದಿರುತ್ತವೆ ಆದ್ದರಿಂದ ಬೀಜಗಳನ್ನು ನೆಡುವಮುನ್ನ ಒಂದು ಋತುವಿಗಿಂತ ಹೆಚ್ಚು ಕಾಲ ಸಂಗ್ರಹಿಸಬಾರದು.


1.8 x 1.8 ಮೀ ಅಂತರವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ. ಆದಾಗ್ಯೂ 1.5 x 1.5 m ಅಂತರದೊಂದಿಗೆ ಹೆಚ್ಚಿನ ಸಾಂದ್ರತೆಯ ಕೃಷಿಯನ್ನು ರೈತರಿಗೆ ಶಿಫಾರಸು ಮಾಡಲಾಗುತ್ತದೆ ಈದು ಆದಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.


ಆರಂಭದಲ್ಲಿ 3 - 4 ಗಿಡಗಳನ್ನು ಪ್ರತಿ ಗುಂಡಿಗಳಲ್ಲಿ ನೆಡಬಹುದು ಮತ್ತು ನಂತರ ಗಿಡಗಳ ಬೆಳವಣಿಗೆ ಮತ್ತು ಗಂಡು ಹಾಗು ಹೆಣ್ಣು ಗಿಡಗಳ ಸಂಖ್ಯೆಯನ್ನು ಆದರಿಸಿ ಪ್ರತಿ ಗುಂಡಿಗೆ ಕೇವಲ ಒಂದು ಗಿಡವನ್ನು ಇಟ್ಟುಕೊಳ್ಳಬೇಕು ಮತ್ತು ಹಾಗೆ ಮಾಡುವಾಗ ತೋಟದಲ್ಲಿ ಒಟ್ಟು 10% ಗಂಡು ಗಿಡಗಳನ್ನು ಪರಾಗಸ್ಪರ್ಶ ಮಾಡಲು ಮತ್ತು ಉಳಿದ 90% ಹೆಣ್ಣು ಗಿಡಗಳು ಹಣ್ಣು ಬಿಡುವ ಸಲುವಾಗಿ ಇಟ್ಟುಕೊಳ್ಳಬೇಕು.


ಈ ಕಾರ್ಯಾಚರಣೆಯನ್ನು ಮುಖ್ಯವಾಗಿ ಬೆಳವಣಿಗೆಯ ಆರಂಭಿಕ ಅವಧಿಯಲ್ಲಿ ಕಳೆಗಳನ್ನು ತೆಗೆಯಲು ಮಾಡಲಾಗುತ್ತದೆ. ಕಳೆ ತೆಗೆಯಲು ಮತ್ತು ಬೇರು ವಲಯದಲ್ಲಿ ಉತ್ತಮವಾದ ಗಾಳಿಯ ಸಂಚಾರಕ್ಕಾಗಿ, ಸಾಲುಗಳ ನಡುವೆ ಉಳುಮೆ ಮಾಡಿ ಮಣ್ಣನ್ನು ಬಿಡಿಸಬೇಕು. ಕೆಲವು ಉದಯ-ಪೂರ್ವ ಕಳೆನಾಶಕಗಳನ್ನು ಸಹ ಕಳೆ ನಿರ್ವಹಣೆಗೆ ಬಳಸಬಗುದು.


ಪಪ್ಪಾಯಿ ಗಿಡಗಳನ್ನು ಅವುಗಳು ಉತ್ಪಾದಿಸುವ ಹೂವಿನ ಪ್ರಕಾರವನ್ನು ಆಧರಿಸಿ ಗಂಡು, ಹೆಣ್ಣು ಅಥವಾ ದ್ವಿಲಿಂಗ ಮರಗಳಾಗಿ ವಿಂಗಡಿಸಬಹುದು. ಮರದ ಪ್ರಕಾರ, ಹೂವುಗಳು ಮತ್ತು ಹಣ್ಣುಗಳ ಕಾರ್ಯ ಮತ್ತು ಗಾತ್ರ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಬೆಳವಣಿಗೆಯ ಹಂತಗಳಲ್ಲಿ ತಾಪಮಾನವನ್ನು ಅವಲಂಬಿಸಿ ಪಪ್ಪಾಯ ಗಿಡಗಳ ಲಿಂಗ ಬದಲಾಗಬಹುದು.


ಉತ್ತಮ ಬೆಳವಣಿಗೆ, ಉತ್ಪಾದನೆ ಮತ್ತು ಗುಣಮಟ್ಟಕ್ಕಾಗಿ, ಬೆಳೆ ಬೆಳವಣಿಗೆ ಮತ್ತು ಮಣ್ಣಿನ ಪ್ರಕಾರವನ್ನು ಅವಲಂಬಿಸಿ, ಬೆಳೆಗೆ ಸರಿಯಾಗಿ ನೀರುಣಿಸುವ ಮೂಲಕ ಮಣ್ಣಿನ ತೇವಾಂಶವನ್ನು ಸದಾ ಕಾಪಾಡಿಕೊಳ್ಳಬೇಕು. ಆದರೆ ಯಾವುದೇ ಸಂದರ್ಭದಲ್ಲಿಯೂ, ಗಿಡಗಳ ಬೇರಿನ ಜಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಹಾಗಾದಲ್ಲಿ ಬೇರು ಮತ್ತು ಕಾಂಡದ ಕೊಳೆತ ಉಂಟಾಗಿ ಬೆಳೆಗೆ ಬಹಳ ಹಾನಿಯಾಗುತ್ತದೆ. ಹನಿ ನೀರಾವರಿ ಪದ್ದತಿಯು ಪ್ರಯೋಜನಕಾರಿಯಾಗಿದೆ ಮತ್ತು ಪ್ರತಿ ಗಿಡಕ್ಕೆ ದಿನಕ್ಕೆ ನೀಡಬೇಕಾದ ನೀರಿನ ಮತ್ತು ಗೊಬ್ಬರದ ಪ್ರಮಾಣವನ್ನು ನಿರ್ಣಾಯಕವಾಗಿ ಪರಿಗಣಿಸಬೇಕು.


ಪ್ರತಿ ಎಕರೆಗೆ ತಲಾ 200 ಕೆಜಿ ಎನ್. ಪಿ.ಕೆ., ಜೊತೆಗೆ 8-10 ಟನ್ ಕೊಟ್ಟಿಗೆ ಗೊಬ್ಬರ, 20 ರಿಂದ 40 ಕೆಜಿ ಸೂಕ್ಷ್ಮ ಪೋಷಕಾಂಶ ಮಿಶ್ರಣ ಮತ್ತು ಸೀವೀಡ್ ಸಾರದ ಕಣಕವನ್ನು ಅನ್ವಯಿಸಬೇಕು.
ಮೈಟ್ಸ್ (ನುಸಿ)
Aphids causes curling and yellowing of leaf. Sooty mold growth on honey dew and transmit viral diseases like Papaya Ringspot Virus. Aphids can be managed by avoiding excessive nitrogen fertilizers. Use reflective mulches to repel aphids. Aphids can be also managed by using recommended chemicals.

Mealybugs feed by inserting long sucking mouthparts styles into plants and drawing sap out of the tissue. Higher rate of infestations causes more damage and plant growth is reduced and fruit quality will poor. Mealy bug may cause severe yield loss and it can control by using recommended Insecticides.


Whiteflies are a common pest of papaya and are destructive/active during the dry season. They suck the cell sap and are seen clustering between the veins on the ventral surface of the leaves. The leaves become yellowish, wrinkle, and curl downwards. They also act as vectors in transmitting the virus and can be manage by using recommended insecticides.


Anthracnose in papaya appears as small and water-soaked spots on ripening fruits. Later spot becomes sunken and dark on fruit. Fruit rot and premature fruit drop in severe cases. Use healthy seedlings, avoid overhead watering, rotate crops, and ensure proper spacing for airflow for management of Anthracnose. Fungicide treatment reduces anthracnose risk.

Powdery mildew appears as white, powdery spots on leaves and stems, which can be managed by improving air circulation, avoiding overhead irrigation, and by applying fungicides to manage powdery mildew.

Top leaves show yellow mosaic and green oily streaks on stems and petioles. Ring spots appear on flowers and fruits. The disease, spread by aphids, can cause 5–100% yield loss depending on plant age at infection. So control Aphid vector by recommended insecticides.


Papaya mosaic virus causes yellow-green mosaic patterns and blister-like dark green patches on young top leaves, shortened petioles, upright leaf posture, and stunted growth, with aphids acting as the primary vector. Control the aphid vector using insecticides recommended by agricultural experts.

ಬಿತ್ತನೆ ಮಾಡಿದ 9 ರಿಂದ 10 ತಿಂಗಳ ನಂತರ ಸಾಮಾನ್ಯವಾಗಿ ಕಟಾವು ಆರಂಭವಾಗುತ್ತದೆ. ಹಳದಿ ಬಣ್ಣದ ಗೆರೆಗಳು ಹಣ್ಣುಗಳ ಮೇಲೆ ಮೂಡಲು ಆರಂಭವಾದ ನಂತರ ಕೊಯ್ಲು ಮಾಡಲಾಗುತ್ತದೆ. ಪಪ್ಪಾಯಿ ಮರಗಳು ಹೆಚ್ಚು ಎತ್ತರವಿಲ್ಲದ ಕಾರಣ, ಕೈಗಳಿಂದ ತೆಹೆಯಬಹುದು. 25 ಕೆಜಿ/ಗಿಡದಿಂದ ಕೆಲವು ತಳಿಗಳಲ್ಲಿ 75-100 ಕೆಜಿಯವರೆಗೂ ಇಳುವರಿ ಬರುತ್ತದೆ.


ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು, ಲೇಖನವನ್ನು ಇಷ್ಟಪಡಲು ನೀವು ♡ ಐಕಾನ್ ಕ್ಲಿಕ್ ಮಾಡಿದ್ದೀರಿ ಮತ್ತು ಲೇಖನವನ್ನು ಈಗ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ನಾವು ಭಾವಿಸುತ್ತೇವೆ!