ಬಾಯರ್ ಫಾರ್ಮ್ರೈಸ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿ!
ಪರಿಹಾರಗಳಿಗಾಗಿ ಕೃಷಿ ತಜ್ಞರು!
ನಿಯಮಗಳು ಮತ್ತು ಷರತ್ತುಗಳು
ಬಳಕೆ ಮತ್ತು ಪ್ರಯೋಜನದ ಹಸ್ತಾಂತರ
ಈ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ಎಲ್ಲಾ ವಿವರಗಳು, ದಾಖಲೆಗಳು ಮತ್ತು ಚಿತ್ರಣಗಳು ಕೇವಲ ಬಾಯರ್ ನ ಆಸ್ತಿಯಾಗಿವೆ. ಇವುಗಳನ್ನು ಬಳಸಲು ಯಾವುದೇ ಅನುಮತಿಯನ್ನು ಈ ಷರತ್ತಿನ ಮೇರೆಗೆ ನೀಡಲಾಗುತ್ತದೆ: ಸಂಬಂಧಿತ ಕಾಪಿರೈಟ್ ಟಿಪ್ಪಣಿಯನ್ನು ಎಲ್ಲಾ ಪ್ರತಿಗಳ ಮೇಲೂ ಪ್ರದರ್ಶಿಸಬೇಕು, ಅಂತಹ ವಿವರಗಳನ್ನು ಕೇವಲ ವೈಯಕ್ತಿಕ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು, ಅವುಗಳನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳಬಾರದು, ವಿವರಗಳನ್ನು ಯಾವುದೇ ರೀತಿಯಲ್ಲಿ ಮಾರ್ಪಡಿಸಬಾರದು ಮತ್ತು ವೆಬ್ಸೈಟ್ನಿಂದ ಪಡೆದ ಎಲ್ಲಾ ಚಿತ್ರಣಗಳನ್ನು ಕೇವಲ ಅದರ ಜೊತೆಗಿರುವ ಪಠ್ಯದೊಂದಿಗೆ ಮಾತ್ರ ಬಳಸಬೇಕು.
ಟ್ರೇಡ್ಮಾರ್ಕ್ ಮತ್ತು ಕಾಪಿರೈಟ್
ಬೇರೆ ರೀತಿಯಲ್ಲಿ ಸೂಚಿಸದ ಹೊರತು ಅಥವಾ ಮೂರನೇ ವ್ಯಕ್ತಿಯ ಹಕ್ಕುಗಳೆಂದು ಬೇರೆ ಯಾವುದೇ ರೀತಿಯಲ್ಲಿ ಗ್ರಹಿಸದ ಹೊರತು, ಈ ವೆಬ್ಸೈಟ್ನಲ್ಲಿರುವ ಎಲ್ಲಾ ಟ್ರೇಡ್ಮಾರ್ಕ್ಗಳು ಬಾಯರ್ ನ ಆಸ್ತಿಯಾಗಿವೆ. ಈ ಟ್ರೇಡ್ಮಾರ್ಕ್ಗಳು ಅಥವಾ ಇತರ ಸಾಮಗ್ರಿಗಳ ಯಾವುದೇ ಅನಧಿಕೃತ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇದು ಕಾಪಿರೈಟ್, ಟ್ರೇಡ್ಮಾರ್ಕ್ ಕಾನೂನು ಅಥವಾ ಇತರ ಕೈಗಾರಿಕಾ ಆಸ್ತಿ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
ಮಿತ ಹೊಣೆಗಾರಿಕೆ
ಈ ವೆಬ್ಸೈಟ್ನಲ್ಲಿ ಒದಗಿಸಲಾದ ವಿವರವಾದ ಮಾಹಿತಿಯನ್ನು ಬಾಯರ್ ಸಂಸ್ಥೆಯು ತನ್ನ ಸಂಪೂರ್ಣ ಜ್ಞಾನ ಮತ್ತು ನಂಬಿಕೆಗೆ ತಕ್ಕಂತೆ, ವೃತ್ತಿಪರ ಜಾಗರೂಕತೆಯನ್ನು ಬಳಸಿ, ಆಂತರಿಕ ಮತ್ತು ಬಾಹ್ಯ ಮೂಲಗಳಿಂದ ಕ್ರೋಢೀಕರಿಸಿದೆ. ಈ ಮಾಹಿತಿಯ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸಲು ಮತ್ತು ನವೀಕರಿಸಲು ನಾವು ಪ್ರಯತ್ನಿಸುತ್ತೇವೆ. ಈ ವೆಬ್ಸೈಟ್ನಲ್ಲಿರುವ ಮಾಹಿತಿಯು ಕೇವಲ ಬಾಯರ್ ಹಾಗೂ ಅದರ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಸ್ತುತಪಡಿಸುವ ಉದ್ದೇಶವನ್ನು ಮಾತ್ರ ಹೊಂದಿದೆ. ಆದಾಗ್ಯೂ, ಈ ವೆಬ್ಸೈಟ್ನಲ್ಲಿನ ಮಾಹಿತಿಯ ಸಂಪೂರ್ಣತೆ ಅಥವಾ ನಿಖರತೆಯ ಬಗ್ಗೆ ಯಾವುದೇ ಪ್ರಾತಿನಿಧ್ಯವನ್ನು ಅಥವಾ ಖಾತರಿಯನ್ನು (ವ್ಯಕ್ತವಾಗಿ ಅಥವಾ ಸೂಚ್ಯವಾಗಿ) ನೀಡುವುದಿಲ್ಲ. ಈ ಮಾಹಿತಿಯು ಪ್ರಕಟವಾದ ದಿನದಂದು ನಿಖರವಾಗಿದ್ದರೂ, ಪ್ರಸ್ತುತಕ್ಕೆ ಅದು ಹಳೆಯದಾಗಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಆದ್ದರಿಂದ, ಈ ವೆಬ್ಸೈಟ್ನಿಂದ ನೀವು ಪಡೆಯುವ ಯಾವುದೇ ಮಾಹಿತಿಯನ್ನು ಯಾವುದೇ ರೂಪದಲ್ಲಿ ಬಳಸುವ ಮುನ್ನ ಅದನ್ನು ಪರಿಶೀಲಿಸಲು ನಾವು ಶಿಫಾರಸು ಮಾಡುತ್ತೇವೆ.ಈ ವೆಬ್ಸೈಟ್ನಲ್ಲಿ ನೀಡಲಾದ ಸಲಹೆಗಳು, ನಮ್ಮ ಇತ್ತೀಚಿನ ಸಲಹೆಗಳನ್ನು — ವಿಶೇಷವಾಗಿ ನಮ್ಮ ಸುರಕ್ಷತಾ ಡೇಟಾಶೀಟ್ಗಳು ಮತ್ತು ತಾಂತ್ರಿಕ ವಿಶೇಷಣಗಳನ್ನು ಹಾಗೂ ನಮ್ಮ ಉತ್ಪನ್ನಗಳು ಉದ್ದೇಶಿತ ಪ್ರಕ್ರಿಯೆಗಳು ಮತ್ತು ಉದ್ದೇಶಗಳಿಗೆ ಸೂಕ್ತವೇ ಎಂಬುದನ್ನು ನೀವೇ ಖುದ್ದಾಗಿ ಪರಿಶೀಲಿಸುವುದರಿಂದ ನಿಮಗೆ ವಿನಾಯಿತಿ ನೀಡುವುದಿಲ್ಲ. ನಮ್ಮ ಉತ್ಪನ್ನಗಳು ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಲಹೆ ಅಥವಾ ಸೂಚನೆಗಳು ಬೇಕಾದಲ್ಲಿ, ದಯವಿಟ್ಟು ನಮ್ಮನ್ನು ನೇರವಾಗಿ ಸಂಪರ್ಕಿಸಿ. ಈ ವೆಬ್ಸೈಟ್ನ ಬಳಕೆದಾರರು, ತಾವು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ವೆಬ್ಸೈಟ್ ಮತ್ತು ಅದರ ವಿಷಯಗಳನ್ನು ಪ್ರವೇಶಿಸುತ್ತಿರುವುದಾಗಿ ಘೋಷಿಸುತ್ತಾರೆ. ಈ ವೆಬ್ಸೈಟ್ನ ಪ್ರವೇಶ ಅಥವಾ ಪ್ರವೇಶಿಸಲು ಸಾಧ್ಯವಾಗದಿರುವುದು, ಅಥವಾ ಈ ವೆಬ್ಸೈಟ್ನ ಬಳಕೆ ಅಥವಾ ಬಳಸಲು ಸಾಧ್ಯವಾಗದಿರುವುದು, ಅಥವಾ ಈ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯನ್ನು ನೀವು ನಂಬಿ ಮಾಡಲಾದ ಕಾರ್ಯಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ಗಾಯಗಳಿಗೆ ಬಾಯರ್ ಆಗಲಿ ಅಥವಾ ಈ ವೆಬ್ಸೈಟ್ನ ಬರವಣಿಗೆ, ಉತ್ಪಾದನೆ ಅಥವಾ ಪ್ರಸರಣದಲ್ಲಿ ತೊಡಗಿರುವ ಮೂರನೇ ವ್ಯಕ್ತಿಗಳಾಗಲಿ ಜವಾಬ್ದಾರರಾಗಿರುವುದಿಲ್ಲ.
ಮೂರನೇ ವ್ಯಕ್ತಿಯ ಮಾರಾಟಗಾರರ ವೆಬ್ಸೈಟ್ಗಳು/ಲಿಂಕ್ಗಳು
ಈ ವೆಬ್ಸೈಟ್ ಮೂರನೇ ವ್ಯಕ್ತಿಯ ವೆಬ್ಸೈಟ್ಗಳ ಲಿಂಕ್ಗಳನ್ನು/ಉಲ್ಲೇಖಗಳನ್ನು ಒಳಗೊಂಡಿದೆ. ಇಂತಹ ಲಿಂಕ್ಗಳನ್ನು ಒದಗಿಸುವುದರ ಮೂಲಕ, ಬಾಯರ್ ಸಂಸ್ಥೆಯು ಅವುಗಳ ವಿಷಯಗಳಿಗೆ ತನ್ನ ಅನುಮೋದನೆಯನ್ನು ನೀಡುವುದಿಲ್ಲ. ಅಲ್ಲದೆ, ಅಂತಹ ವೆಬ್ಸೈಟ್ಗಳ ಲಭ್ಯತೆ ಅಥವಾ ಅವುಗಳ ವಿಷಯಗಳ ಬಗ್ಗೆ ಬಾಯರ್ ಯಾವುದೇ ಜವಾಬ್ದಾರಿಯನ್ನು ಹೊರಲು ಒಪ್ಪುವುದಿಲ್ಲ; ಅಥವಾ ಯಾವುದೇ ರೂಪದಲ್ಲಿ ಅಂತಹ ವಿಷಯಗಳ ಬಳಕೆಯಿಂದ ಉಂಟಾಗುವ ಹಾನಿ ಅಥವಾ ಗಾಯಗಳಿಗೆ ಯಾವುದೇ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಿಲ್ಲ. ಲಿಂಕ್ ಮಾಡಲಾದ ಪುಟಗಳು ನಿರಂತರ ಗುಣಮಟ್ಟದ ಮಾಹಿತಿಯನ್ನು ಒದಗಿಸುತ್ತವೆ ಎಂಬುದಕ್ಕೆ ಬಾಯರ್ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ಇತರ ವೆಬ್ಸೈಟ್ಗಳ ಲಿಂಕ್ಗಳನ್ನು ಬಳಕೆದಾರರಿಗೆ ಕೇವಲ ಅವರ ಅನುಕೂಲಕ್ಕಾಗಿ ಮಾತ್ರ ಒದಗಿಸಲಾಗಿದೆ. ಬಳಕೆದಾರರು ಅಂತಹ ವೆಬ್ಸೈಟ್ಗಳನ್ನು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಪ್ರವೇಶಿಸುತ್ತಾರೆ. ಲಿಂಕ್ಗಳ ಆಯ್ಕೆಯು ಯಾವುದೇ ರೀತಿಯಲ್ಲಿ ಬಳಕೆದಾರರನ್ನು ಕೇವಲ ಆ ಲಿಂಕ್ ಮಾಡಲಾದ ಪುಟಗಳಿಗಷ್ಟೇ ಸೀಮಿತಗೊಳಿಸಬಾರದು.
ನೀವು ಒದಗಿಸಿರುವ ವಿವರಗಳು
ಈ ವೆಬ್ಸೈಟ್ನ ಬಳಕೆದಾರರು ತಾವು ಬಾಯರ್ ಸಂಸ್ಥೆಗೆ ಕಳುಹಿಸುವ ವಿವರಗಳ ವಿಷಯ ಮತ್ತು ನಿಖರತೆಗೆ, ಹಾಗೂ ಆ ವಿವರಗಳಲ್ಲಿ ಒಳಗೊಂಡಿರಬಹುದಾದ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳ ಉಲ್ಲಂಘನೆಯಾಗದಿರುವುದಕ್ಕೆ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಮಾಹಿತಿಯ ಮಾಸ್ಟರ್ ಡೇಟಾ ಅಥವಾ ಬಳಕೆಯ ಡೇಟಾವನ್ನು ಮೀರಿದ ವೈಯಕ್ತಿಕ ವಿವರಗಳು ಒಳಗೊಂಡಿರದ ಹೊರತು, ಅಂತಹ ವಿವರಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯ ಉದ್ದೇಶಕ್ಕಾಗಿ ಅಥವಾ ಯಾವುದೇ ಇತರ ನಿರ್ದಿಷ್ಟ ವ್ಯವಹಾರದ ಉದ್ದೇಶಕ್ಕಾಗಿ ಬಳಸಲು ಬಳಕೆದಾರರು ಬಾಯರ್ ಸಂಸ್ಥೆಗೆ ತಮ್ಮ ಸಮ್ಮತಿಯನ್ನು ನೀಡುತ್ತಾರೆ. ಪ್ರಮುಖವಾಗಿ, ಉತ್ಪನ್ನಗಳು ಅಥವಾ ಸೇವೆಗಳ ಅಭಿವೃದ್ಧಿ, ಉತ್ಪಾದನೆ ಮತ್ತು ಮಾರುಕಟ್ಟೆ ಪ್ರಕ್ರಿಯೆಯಂತಹ ಯಾವುದೇ ಉದ್ದೇಶಕ್ಕಾಗಿ ಅಂತಹ ಸಂದೇಶಗಳ ವಿಷಯಗಳನ್ನು (ಅವುಗಳಲ್ಲಿ ಒಳಗೊಂಡಿರುವ ಆಲೋಚನೆಗಳು, ಆವಿಷ್ಕಾರಗಳು, ನೀಲನಕ್ಷೆಗಳು, ತಂತ್ರಗಳು ಮತ್ತು ಪರಿಣತಿಯನ್ನು ಒಳಗೊಂಡಂತೆ) ಬಳಸಲು ಹಾಗೂ ಅಂತಹ ಮಾಹಿತಿಯನ್ನು ಮರುಉತ್ಪಾದಿಸಲು ಮತ್ತು ಯಾವುದೇ ಮಿತಿಗಳಿಲ್ಲದೆ ಮೂರನೇ ವ್ಯಕ್ತಿಗಳಿಗೆ ಲಭ್ಯವಾಗುವಂತೆ ಮಾಡಲು ಬಾಯರ್ ಸಂಸ್ಥೆಗೆ ಹಕ್ಕಿರುತ್ತದೆ.
ಅಂತರರಾಷ್ಟ್ರೀಯ ಬಳಕೆದಾರರು
ಈ ವೆಬ್ಸೈಟ್ ಅನ್ನು ಭಾರತದಲ್ಲಿನ ಬಾಯರ್ ಸಂಸ್ಥೆಯು ಪರಿಶೀಲಿಸುತ್ತದೆ, ನಿರ್ವಹಿಸುತ್ತದೆ ಮತ್ತು ನವೀಕರಿಸುತ್ತದೆ. ಇದು ಅಂತರರಾಷ್ಟ್ರೀಯ ಬಳಕೆಗೂ ಉದ್ದೇಶಿತವಾಗಿದೆ. ಆದಾಗ್ಯೂ, ಈ ವೆಬ್ಸೈಟ್ನಲ್ಲಿ ಪ್ರಸ್ತುತಪಡಿಸಲಾದ ವಿವರಗಳು ಭಾರತದ ಹೊರಗಿನ ಸ್ಥಳಗಳಿಗೂ ಸರಿಯಾಗಿರುತ್ತವೆ ಮತ್ತು ಪ್ರಮುಖವಾಗಿ, ಉತ್ಪನ್ನಗಳು ಹಾಗೂ ಸೇವೆಗಳು ಅದೇ ರೂಪದಲ್ಲಿ, ಅದೇ ಗಾತ್ರದಲ್ಲಿ ಅಥವಾ ಅದೇ ನಿಬಂಧನೆಗಳೊಂದಿಗೆ ಲಭ್ಯವಿರುತ್ತವೆ ಎಂಬುದಕ್ಕೆ ಬಾಯರ್ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ನೀವು ಈ ವೆಬ್ಸೈಟ್ ಅನ್ನು ಭಾರತದ ಹೊರಗಿನ ಸ್ಥಳದಿಂದ ಪ್ರವೇಶಿಸಿದರೆ ಅಥವಾ ಅಂತಹ ಸ್ಥಳದಿಂದ ವಿಷಯಗಳನ್ನು ಡೌನ್ಲೋಡ್ ಮಾಡಿದರೆ, ಆ ಸ್ಥಳದಲ್ಲಿ ಅನ್ವಯವಾಗುವ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿ ನೀವು ಕಾರ್ಯನಿರ್ವಹಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮದೇ ಸ್ವಂತ ಜವಾಬ್ದಾರಿಯಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಈ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾದ ಉತ್ಪನ್ನಗಳು ದೇಶಕ್ಕೆ ಅನುಗುಣವಾಗಿ ವಿಭಿನ್ನ ಪ್ಯಾಕೇಜಿಂಗ್, ವಿಭಿನ್ನ ಪ್ಯಾಕೇಜ್ ಗಾತ್ರಗಳು ಅಥವಾ ವಿಭಿನ್ನ ಅಕ್ಷರಗಳು ಅಥವಾ ಗುರುತುಗಳೊಂದಿಗೆ ಬರಬಹುದು.
ಯುಎಸ್ಎ ದಲ್ಲಿ ವ್ಯವಹಾರವನ್ನು ಬಾಯರ್ ಕಾರ್ಪೊರೇಷನ್ ನಿರ್ವಹಿಸುತ್ತದೆ. ಯುಎಸ್ಎ ದಲ್ಲಿರುವ ಗ್ರಾಹಕರು ಆ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.
ಬಾಯರ್ ಉತ್ಪನ್ನಗಳ ಮಾರಾಟ
ನಮ್ಮ ಉತ್ಪನ್ನಗಳನ್ನು ನಮ್ಮ 'ಮಾರಾಟ ಮತ್ತು ವಿತರಣೆಯ ಸಾಮಾನ್ಯ ನಿಯಮಗಳ' ಸದ್ಯದ ನಿಯಮಾವಳಿಗಳ ಪ್ರಕಾರವೇ ಮಾರಾಟ ಮಾಡಲಾಗುತ್ತದೆ.
ಲಾಗಿನ್ ಹೊಂದಿರುವ ಸೈಟ್: ಪ್ರವೇಶದ ಹಕ್ಕುಗಳು
ನಿಮ್ಮ ಲಾಗಿನ್ ವಿವರಗಳನ್ನು ಅನಧಿಕೃತ ಮೂರನೇ ವ್ಯಕ್ತಿಗಳು ಬಳಸದಂತೆ ರಕ್ಷಿಸಲು ನೀವು ಬದ್ಧರಾಗಿದ್ದೀರಿ ಮತ್ತು ನಿಮ್ಮ ಅನುಮತಿಯಿಲ್ಲದೆ ಇತರರು ಅವುಗಳನ್ನು ಬಳಸದಂತೆ ನೀವು ಖಚಿತಪಡಿಸಿಕೊಳ್ಳಬೇಕು ಎಂಬುದನ್ನು ದಯವಿಟ್ಟು ಗಮನಿಸಿ. ಬಾಯರ್ ವೆಬ್ಸೈಟ್ನಲ್ಲಿ ಲಭ್ಯವಿರುವ ಯಾವುದೇ ವಿವರಗಳಿಗೆ ಸಂಬಂಧಿಸಿದಂತೆ ಭದ್ರತೆಯ ಉಲ್ಲಂಘನೆಯಾಗಿದೆ ಎಂದು ನಿಮಗೆ ತಿಳಿದುಬಂದರೆ, ಅಥವಾ ಅನಧಿಕೃತ ವ್ಯಕ್ತಿಗಳು ನಿಮ್ಮ ಪ್ರವೇಶದ ಹಕ್ಕುಗಳನ್ನು ಪಡೆದುಕೊಂಡಿದ್ದರೆ, ಅಥವಾ ಅಂತಹ ಪ್ರವೇಶವು ಸಾಧ್ಯವಾಗಬಹುದು ಎಂಬುದರ ಯಾವುದೇ ಸೂಚನೆಗಳು ನಿಮಗೆ ಕಂಡುಬಂದಲ್ಲಿ, ನೀವು ತಕ್ಷಣವೇ ಬಾಯರ್ ಸಂಸ್ಥೆಗೆ ತಿಳಿಸಬೇಕು.
ಅನ್ವಯವಾಗುವ ಕಾನೂನು
ಈ ವೆಬ್ಸೈಟ್ ಅಥವಾ ಅದರ ಬಳಕೆಗೆ ಸಂಬಂಧಿಸಿದ ಯಾವುದೇ ಕಾನೂನು ಹಕ್ಕುಗಳು ಅಥವಾ ಮೊಕದ್ದಮೆಗಳು ಭಾರತದ ಕಾನೂನುಗಳ ವ್ಯಾಖ್ಯಾನಕ್ಕೆ ಒಳಪಟ್ಟಿರುತ್ತವೆ; ಆದರೆ ಅಂತರರಾಷ್ಟ್ರೀಯ ಖಾಸಗಿ ಕಾನೂನಿನ ನಿಬಂಧನೆಗಳು, ಜುಲೈ 1, 1964 ರ ಸರಕುಗಳ ಅಂತರರಾಷ್ಟ್ರೀಯ ಮಾರಾಟದ ಏಕರೂಪದ ಕಾನೂನಿಗೆ ಸಂಬಂಧಿಸಿದ ಹೇಗ್ ಕನ್ವೆನ್ಷನ್ ಮತ್ತು ಏಪ್ರಿಲ್ 11, 1980 ರ ಯುಎನ್ (ವಿಶ್ವಸಂಸ್ಥೆ) ಮಾರಾಟ ಕನ್ವೆನ್ಷನ್ನ ನಿಬಂಧನೆಗಳನ್ನು ಇದು ಹೊರತುಪಡಿಸುತ್ತದೆ.
ಭವಿಷ್ಯದ ಮುನ್ಸೂಚನೆ ಹೇಳಿಕೆಗಳು
ಈ ವೆಬ್ಸೈಟ್, ಬಾಯರ್ ಕಂಪನಿಯ ಆಡಳಿತ ಮಂಡಳಿಯು ಪ್ರಸ್ತುತ ಮಾಡಿಕೊಂಡಿರುವ ಊಹೆಗಳು ಮತ್ತು ಮುನ್ಸೂಚನೆಗಳ ಆಧಾರದ ಮೇಲಿನ 'ಭವಿಷ್ಯದ ಮುನ್ಸೂಚನೆ ಹೇಳಿಕೆಗಳನ್ನು' ಒಳಗೊಂಡಿರಬಹುದು. ವಿವಿಧ ತಿಳಿದಿರುವ ಮತ್ತು ತಿಳಿಯದೇ ಇರುವ ಅಪಾಯಗಳು, ಅನಿಶ್ಚಿತತೆಗಳು ಮತ್ತು ಇತರ ಅಂಶಗಳು, ಕಂಪನಿಯ ನಿಜವಾದ ಭವಿಷ್ಯದ ಫಲಿತಾಂಶಗಳು, ಆರ್ಥಿಕ ಪರಿಸ್ಥಿತಿ, ಬೆಳವಣಿಗೆ ಅಥವಾ ಕಾರ್ಯಕ್ಷಮತೆಗೂ ಮತ್ತು ಇಲ್ಲಿ ನೀಡಲಾದ ಅಂದಾಜುಗಳಿಗೂ ನಡುವೆ ಭಾರಿ ವ್ಯತ್ಯಾಸಗಳಿಗೆ ಕಾರಣವಾಗಬಹುದು. ಈ ಅಂಶಗಳು ಬಾಯರ್ ಕಂಪನಿಯ ಸಾರ್ವಜನಿಕ ವರದಿಗಳಲ್ಲಿ ಚರ್ಚಿಸಲ್ಪಟ್ಟಿದ್ದು, ಅವುಗಳು ಕಂಪನಿಯ ಅಧಿಕೃತ ವೆಬ್ಸೈಟ್ http://www.bayer.in/ ನಲ್ಲಿ ಲಭ್ಯವಿವೆ. ಈ ಭವಿಷ್ಯದ ಮುನ್ಸೂಚನೆ ಹೇಳಿಕೆಗಳನ್ನು ನವೀಕರಿಸಲು ಅಥವಾ ಭವಿಷ್ಯದ ಘಟನೆಗಳು ಅಥವಾ ಬೆಳವಣಿಗೆಗಳಿಗೆ ಅನುಗುಣವಾಗಿ ಅವುಗಳನ್ನು ಬದಲಾಯಿಸಲು ಕಂಪನಿಯು ಯಾವುದೇ ರೀತಿಯ ಹೊಣೆಗಾರಿಕೆಯನ್ನು ಹೊರುವುದಿಲ್ಲ.