• Farmrise logo

    ಬಾಯರ್ ಫಾರ್ಮ್‌ರೈಸ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿ!

    ಪರಿಹಾರಗಳಿಗಾಗಿ ಕೃಷಿ ತಜ್ಞರು!

    ಆ್ಯಪ್ ಅನ್ನು ಸ್ಥಾಪಿಸಿ
  • ಹಲೋ ಬಾಯರ್
    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM -ಕಿಸಾನ್)
    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM -ಕಿಸಾನ್)
    ಈ ಯೋಜನೆಯನ್ನು ಮೊದಲು 'https://www.pmkisan.gov.in/' ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು ಮತ್ತು ಹೆಚ್ಚಿನ ಮಾಹಿತಿಗಾಗಿ, ನೀವು 'https://www.pmkisan.gov.in/' ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸರ್ಕಾರವು ಹೊಸದಾಗಿ ಒಂದು ಕೇಂದ್ರ ವಲಯದ ಯೋಜನೆಯನ್ನು ಪ್ರಾರಂಭಿಸಿದ್ದು ಅದು ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ಭೂಮಿಯನ್ನು ಹೊಂದಿರುವ ರೈತ ಕುಟುಂಬಗಳಿಗೆ ಅವರು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಸಾಮಗ್ರಿಗಳನ್ನು ಕೊಳ್ಳಲು ಹಾಗು ಅವರ ಕೌಟಂಬಿಕ ಅಗತ್ಯಗಳಿಗೆ ಆರ್ಥಿಕವಾಗಿ ಸಹಾಯಕವಾಗುತ್ತದೆ. ಈ ಯೋಜನೆಯಡಿಯಲ್ಲಿ, ಉದ್ದೇಶಿತ ಫಲಾನುಭವಿಗಳಿಗೆ ಅನುಕೂಲತೆಯನ್ನು ವರ್ಗಾಯಿಸುವ ಸಂಪೂರ್ಣ ಹೊಣೆಗಾರಿಕೆಯಿದ್ದು ಅದನ್ನು ಭಾರತ ಸರ್ಕಾರವು ಭರಿಸಲಿದೆ. ಅರ್ಹತೆ : ದಿನಾಂಕ 01.02.2019 ರವರೆಗೆ ರಾಜ್ಯಗಳ/ UT ಭೂ ದಾಖಲೆಗಳಲ್ಲಿ ತಮ್ಮ ಹೆಸರನ್ನು ಹೊಂದಿರುವ 2 ಹೆಕ್ಟರ್ ಗಳಷ್ಟು ಕೃಷಿ ಭೂಮಿಯನ್ನು ಹೊಂದಿರುವ ಎಲ್ಲಾ ಕುಟುಂಬಗಳು ಈ ಯೋಜನೆಯಡಿಯಲ್ಲಿ ಅನುಕೂಲತೆಗಳನ್ನು ಪಡೆದುಕೊಳ್ಳಲು ಅರ್ಹವಾಗಿರುತ್ತವೆ. ಆದರೆ, ಇವುಗಳಲ್ಲಿ ಈ ಕೆಳಗಿನವರು ಅನುಕೂಲತೆಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ: (a) ಎಲ್ಲಾ ಸಾಂಸ್ಥಿಕ ಭೂ ಮಾಲೀಕರು ; ಮತ್ತು (b) ಯಾವುದೇ ಕುಟುಂಬದ ಒಬ್ಬರು ಅಥವಾ ಹೆಚ್ಚಿನ ಸದಸ್ಯರು ಈ ಕೆಳಗಿನ ವರ್ಗದಲ್ಲಿದ್ದರೆ :- i. ಮಾಜಿ(ನಿಕಟ ಪೂರ್ವ) ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ii. ಮಾಜಿ(ನಿಕಟ ಪೂರ್ವ) ಮತ್ತು ಹಾಲಿ ಸಚಿವರು/ರಾಜ್ಯ ಸಚಿವರುಗಳು ಮತ್ತು ಮಾಜಿ(ನಿಕಟ ಪೂರ್ವ) /ಹಾಲಿ ಲೋಕ ಸಭಾ/ರಾಜ್ಯ ಸಭಾ ಸದಸ್ಯರು ರಾಜ್ಯದ ವಿಧಾನ ಸಭೆಗಳು/ ರಾಜ್ಯ ವಿಧಾನ ಪರಿಷತ್ತು, ಮಾಜಿ(ನಿಕಟ ಪೂರ್ವ) ಮತ್ತು ಹಾಲಿ ಮುನ್ಷಿಪಲ್ ಕಾರ್ಪೋರೇಷನ್ ಕೌನ್ಸಿಲರುಗಳು 4 ಕ್ಕೆ, ಒಂದು ವರ್ಷದಲ್ಲಿ ಎಷ್ಟು ಬಾರಿ ಅನುಕೂಲತೆಯನ್ನು ಕೊಡಲಾಗುತ್ತದೆ ಜಿಲ್ಲಾ ಪಂಚಾಯತಿಯ ಮಾಜಿ (ನಿಕಟಪೂರ್ವ) ಮತ್ತು ಹಾಲಿ ಅಧ್ಯಕ್ಷರುಗಳು. iii. ಕೇಂದ್ರ/ರಾಜ್ಯ ಸರ್ಕಾರಗಳ/ ಇಲಾಖೆಗಳ/ ಸಚಿವಾಲಯಗಳ ಸೇವೆಯಲ್ಲಿರುವ ಹಾಗು ನಿವೃತ್ತರಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ಉದ್ಯೋಗಿಗಳು ಮತ್ತು ಅವುಗಳ ಕೇಂದ್ರ ಅಥವಾ ರಾಜ್ಯ ಪಿಎಸ್ ಇ ಕ್ಷೇತ್ರ ಘಟಕ ಮತ್ತು ಸಂಬಂಧಿಸಿದ ಕಛೇರಿಗಳು/ ಸರ್ಕಾರದ ಅಧೀನ ಸ್ವಾಯತ್ತ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಿಯಮಿತ ಉದ್ಯೋಗಿಗಳು (ಮಲ್ಟಿ ಟಾಸ್ಕಿಂಗ್(ವಿವಧ ಕೆಲಸದ) ಸಿಬ್ಬಂದಿ/ IV ದರ್ಜೆ/ ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ) iv. ತಿಂಗಳ ಆದಾಯವು ರೂ. 10,000/-ಅಥವಾ ಹೆಚ್ಚಾಗಿದ್ದು ಉದ್ಯೋಗಿಗಳು (ಮಲ್ಟಿ ಟಾಸ್ಕಿಂಗ್ ವಿವಧ ಕೆಲಸದ ಸಿಬ್ಬಂದಿ/IV ದರ್ಜೆ/ ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ) ಅಧಿಕೃತವಾದ/ ನಿವೃತ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳು v. ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿರುವ ಎಲ್ಲರೂ. vi. ವೃತ್ತಿಪರರಾದ ವೈದ್ಯರು, ಇಂಜೀನಿಯರರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಗಳು ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಿ ವೃತ್ತಿಯನ್ನು ನಿರ್ವಹಿಸುತ್ತಿರುವ ವಾಸ್ತುಶಿಲ್ಪಿಗಳು. ಅನುಕೂಲತೆಗಳು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಖಚಿತ ಆದಾಯವನ್ನೊದಗಿಸಿಕೊಡುತ್ತದೆ. 2 ಹೆಕ್ಟರ್ ನಷ್ಟು ಕೃಷಿ ಭೂಮಿಯನ್ನು ಹೊಂದಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (SMF) ವಾರ್ಷಿಕ ರೂ.6000/- ಗಳ ಆದಾಯ ಬೆಂಬಲವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಅವರ ಖಾತೆಗೆ 3 ಸಮ ಕಂತುಗಳಲ್ಲಿ ವರ್ಗಾಯಿಸಲಾಗುವುದು. ಯೋಜನೆಯ ಸಂಪೂರ್ಣ ವೆಚ್ಚವಾದ ರೂ. 75000 ಕೋಟಿಗಳನ್ನು 2019-20 ರಲ್ಲಿ ಕೇಂದ್ರ ಸರ್ಕಾರವೇ ಭರಿಸಲಿದೆ. ಸುಮಾರು 12 ಕೋಟಿಗಳಷ್ಟು ಕುಟುಂಬಗಳಿಗೆ ಈ ಯೋಜನೆಯಡಿಯಲ್ಲಿ ಅನುಕೂಲ ದೊರೆಯಲಿದೆ.
    Some more Government Schemes
    ನಿಮಗಾಗಿ ಲಭ್ಯವಿರುವ ಇತ್ತೀಚಿನ ಸರ್ಕಾರಿ ಯೋಜನೆಗಳು ಮತ್ತು ಪ್ರಯೋಜನಗಳ ಬಗ್ಗೆ ನವೀಕೃತವಾಗಿರಿ.
    Government Scheme Image
    Some more Government Schemes
    Some more Government Schemes
    ಕೃಷಿ ಮೂಲಸೌಕರ್ಯ ನಿಧಿ
    No date available
    Government Scheme Image
    Some more Government Schemes
    Some more Government Schemes
    ಅಗ್ರಿಕ್ಲಿನಿಕ್ ಮತ್ತು ಅಗ್ರಿಬಿಸಿನೆಸ್ ಕೇಂದ್ರಗಳ ಯೋಜನೆ - ನಬಾರ್ಡ್
    No date available

    ನಮ್ಮ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿ

    ಫಾರ್ಮ್ ಆನ್-ದಿ-ಗೋ: ನಮ್ಮ ಆ್ಯಪ್ ನಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಮಾರುಕಟ್ಟೆಯ ದಿನನಿತ್ಯದ ಮಾಹಿತಿಯನ್ನು ಪಡೆಯಿರಿ. ಇದು ನಿಮ್ಮ ಭಾಷೆಯಲ್ಲಿಯೂ ಲಭ್ಯವಿದೆ.
    Google Play Image
    ಸಹಾಯ ಬೇಕೇ?
    ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಮ್ಮ ಹಲೋ ಬಾಯರ್ ಬೆಂಬಲವನ್ನು ಸಂಪರ್ಕಿಸಿ
    Bayer Logo
    ಟೋಲ್ ಫ್ರೀ ಸಹಾಯ ಕೇಂದ್ರ
    1800-120-4049
    ಮುಖಪುಟಮಂಡಿ ಬೆಲೆ